ಹುಬ್ಬಳ್ಳಿ: ಸಿಮ್ ಬ್ಲಾಕ್ ಓಪನ್ ಮಾಡಲು ಮೊಬೈಲ್‌ಗೆ ಟೀಮ್ ವೀವರ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ತಿಳಿಸಿದ ವಂಚಕ, ನಗರದ ಯಲ್ಲಾಪರ ಓಣಿಯ ವಿಜಯಲಕ್ಷ್ಮಿ ಗಂಗಣ್ಣವರ ಎಸ್‌ಬಿಐ ಖಾತೆಯಿಂದ ₹1.51 ಲಕ್ಷ ವರ್ಗಾಯಿಸಿಕೊಂಡಿದ್ದಾನೆ.
ವಿಜಯಲಕ್ಷ್ಮಿ ಅವರ ಮೊಬೈಲ್‌ಗೆ ಸಿಮ್ ಬ್ಲಾಕ್ ಆಗಿರುವ ಸಂದೇಶ ಬಂದಿದ್ದು, ಅದನ್ನು ಓಪನ್ ಮಾಡಲು ಅದರಲ್ಲಿರುವ ಮೊಬೈಲ್ ನಂಬರ್‌ಗೆ ಕರೆ ಮಾಡುವಂತೆ ತಿಳಿಸಲಾಗಿತ್ತು. ಆ ನಂಬರ್‌ಗೆ ಕರೆ ಮಾಡಿದಾಗ ಟೀಮ್ ವೀವರ್ ಡೌನ್‌ಲೋಡ್ ಮಾಡಿಕೊಂಡು ಅಳವಡಿಸಿಕೊಳ್ಳಬೇಕು ಎಂದು ವಂಚಕ ತಿಳಿಸಿದ್ದ. ಡೌನ್ಲೋಡ್ ಮಾಡಿಕೊಂಡ ಆ್ಯಪ್‌ಗೆ ಎಕ್ಸೆಸ್ ನೀಡಿ, ಹಣ ವರ್ಗಾಯಿಸಿಕೊಂಡಿದ್ದಾನೆ. ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Check Also
ಹುಬ್ಬಳ್ಳಿ ಧಾರವಾಡ ಅವಳಿ ನಗರ ಅಭಿವೃದ್ಧಿಗೆ ಪ್ರತಿ ತಿಂಗಳು ಪ್ರಗತಿ ಪರಿಶೀಲನಾ ಸಭೆ; ಮೇಯರ್ ರಾಮಣ್ಣ ಬಡಿಗೇರ
Spread the loveಗೌನ್ ಧರಿಸಿ ಸಭೆಗೆ ಬಂದ ಮೇಯರ್ ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿ ನಗರದ ಅಭಿವೃದ್ಧಿಗೆ ನೂತನ ಮಹಾ …