ಹುಬ್ಬಳ್ಳಿ; ತಾಲೂಕಿನ ಬಂಡಿವಾಡ ಗ್ರಾಮದ ಬಳಿಯ ಕ್ರಾಸ್ ನಲ್ಲಿ ಟ್ರಾಕ್ಟರ್ ಹಾಗೂ ಟ್ರಕ್ ನಡುವೆ ಪರಸ್ಪರ ಡಿಕ್ಕಿಯಾಗಿ ನಾಲ್ವರು ಗಂಭೀರವಾದ ಘಟನೆ ಭಾನುವಾರ ನಡೆದಿದೆ.
ಟ್ರಾಕ್ಟರ್ ಗದಗದಿಂದ ಹುಬ್ಬಳ್ಳಿ ಕಡೆ ಹಾಗೂ ಲಾರಿ ಹುಬ್ಬಳ್ಳಿಯಿಂದ ಅಣ್ಣಿಗೇರಿ ಕಡೆ ಹೊರಟಿದ್ದವು. ಗಾಯಾಳು ಹೆಸರು ಮತ್ತು ವಿಳಾಸ ಕುರಿತು ಪೊಲೀಸರು ಮಾಹಿತಿ ಕಲೆಹಾಕುತಿದ್ದು ಲಾರಿ ಹೊಡೆದ ರಭಸಕ್ಕೆ ಟ್ರಾಕ್ಟರ್ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಸ್ಥಳೀಯರು 108 ಸಹಾಯ ವಾಣಿಗೆ ಕರೆ ಮಾಡಿದ್ದು ಕೂಡಲೇ 108 ಸಿಬ್ಬಂದಿ
ಅಂಬುಲೆನ್ಸ್ ಮೂಲಕ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು. ಅಪಘಾತ ಸ್ಥಳದಲ್ಲಿಯೇ 108 ಇಎಂಟಿ ಸಿಬ್ಬಂದಿ ವಿರೂಪಾಕ್ಷ ಹಾಗೂ ಪೈಲೆಟ್ ಶಿವನಗೌಡ ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಿ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು. ಘಟನಾ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು .
