Breaking News

ಆಪ್ ಕಾರ್ಯಕರ್ತ ಡಾ. ವೀರಧವಲ್ ಹೃದಯಘಾತಕ್ಕೆ ಬಲಿ

Spread the love

ಹುಬ್ಬಳ್ಳಿ; ಪ್ರಸಿದ್ಧ ಔಷಧಿ ವ್ಯಾಪಾರಿ, ಸಮಾಜ ಸೇವಕ ಹಾಗೂ ಆಮ್ ಆದ್ಮಿ ಪಕ್ಷದ ಹಿರಿಯ ಕಾರ್ಯಕರ್ತ ಡಾ. ವೀರಧವಲ್ (ರಾಜು ) ವಾಡಕರ ಇಂದು ತೀವ್ರ ಹೃದಯಘಾತ ದಿಂದ ಸಾವನ್ನಪ್ಪಿದ್ದಾರೆ.
ಪ್ರತಿಷ್ಟಿತ ಎಲಬು ಕೀಲುಗಳ ತಜ್ಞ ವೈದ್ಯ ಡಾ. ಪರಾಗ ಮೆಳವಂಕಿ ಅವರ ಅಳಿಯನಾಗಿದ್ದು. ಕಳೆದ ಹಲವು ವರ್ಷಗಳಿಂದ ಸಮಾಜ ಸೇವೆ ಮೂಲಕ ಈ ಭಾಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ರಾಜು ಅತ್ಯಂತ ಸರಳ ಹಾಗೂ ಸಜ್ಜನ ವ್ಯಕ್ತಿಯಾಗಿದ್ದರು. ರಾಜು ಅವರ ಅಂತ್ಯ ಕ್ರಿಯೆ ಇಂದು ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಅಷ್ಟಾ ಗ್ರಾಮದಲ್ಲಿ ಜೈನ ವಿಧಿ ವಿಧಾನ ಪ್ರಕಾರ ಸಕಲ ಗೌರವದೊಂದಿಗೆ ಜರುಗಿತು. ಮೃತರಿಗೆ 50 ವರ್ಷ ವಯಸ್ಸಾಗಿತ್ತು. ಮೃತ ದುರ್ದೈವಿ ರಾಜು ಅವರಿಗೆ ತಾಯಿ,ಹೆಂಡತಿ, ಮೂವರು ಮಕ್ಕಳು ಮತ್ತು ಅಪಾರ ಬಂಧು ಬಳಗ ಹೊಂದಿದ್ದಾರೆ. ಸದಾ ನಗು ನಗುತ ಇರುವ ರಾಜು ಅವರು ಸಾಕಷ್ಟು ಜನರಿಗೆ ಹಗಲು ರಾತ್ರಿವೆನ್ನದೆ ವೈದ್ಯಕೀಯ ಸೇವೆ ಒದಗಿಸಿದ್ದಾರೆ. ರಾಜು ವಾಡಕರ ಅವರ ಸಾವಿಗೆ ಅನೇಕ ರಾಜಕಾರಣಿಗಳು ಹಾಗೂ ಜಯ ಕರ್ನಾಟಕ ಸಂಘಟನೆ ಮತ್ತು ಧಾರವಾಡ ರೋಟರಿ ಸಂಸ್ಥೆ ಮತ್ತು ಅಪಾರ ಗೆಳೆಯರ ಬಳಗ ಸಂತಾಪ ವ್ಯಕ್ತ ಪಡಿಸಿದೆ.


Spread the love

About Karnataka Junction

[ajax_load_more]

Check Also

ಅ,27 ರಂದು ಯಕ್ಷಲೋಕ ವಿಜಯ ಪ್ರಸಂಗ ಪ್ರದರ್ಶನ

Spread the loveಹುಬ್ಬಳ್ಳಿ: ಹುಬ್ಬಳ್ಳಿಯ ಬಂಟ ಹವ್ಯಾಸಿ ಕಲಾವಿದರ ಸಂಘ, ಕಲಾರಂಗದ ವತಿಯಿಂದ ಅ. 27ರಂದು ಸಂಜೆ 4 ಗಂಟೆಗೆ …

Leave a Reply

error: Content is protected !!