ತಾಪಮಾನ ಏರಿಕೆ ತಡೆಯಲು ಪ್ಲಾಸ್ಟಿಕ ಮುಕ್ತ ಮಹಾನಗರ ಮಾಡಲು ಮೌನ ಪ್ರತಿಭಟನೆ.
ಹುಬ್ಬಳ್ಳಿ. ಅಕ್ಕಾ ಪೌಂಡೆಶನ ಟ್ರಸ್ಟ ಆಶ್ರಯದಲ್ಲಿ ಇಂದು ನಗರದಲ್ಲಿ ಮೌನ ಪ್ರತಿಭಟನೆ ಮಾಡಲಾಯಿತು.
ಸುಮಾರು 8 ವರ್ಷದಿಂದ ಹವಾಮಾನ ಬದಲಾವಣೆ ಮತ್ತು ತಾಪ ಏರಿಕೆಯ ತಡೆಯಲು ಪ್ಲಾಸ್ಟಿಕ ಮುಕ್ತ ಮಾಡಲು ಕೇಂದ್ರ ಸರ್ಕಾರ . ರಾಜ್ಯ ಸರ್ಕಾರ ಜಿಲ್ಲಾ ಆಡಳಿತ ಮತ್ತು ಮಹಾನಗರ ಪಾಲಿಕೆ ಗೆ ಕಟ್ಟುನಿಟ್ಟಾಗಿ ಕಾನೂನು ಜಾರಿಗೆ ತರಬೆಕೆಂದು ಹೊರಾಟ್ ಮನವಿ ನೀಡಿದರು ಏನು ಪ್ರಯೋಜನವಾಗಿರುವುದಿಲ್ಲ
ಇಂದು ಮೌನ ಪ್ರತಿಭಟನೆ ಮಾಡುವ ಮುಖಾಂತರ ನಮ್ಮ ಆಕ್ರೋಶ ಹೊರ ಹಾಕುತ್ತಿದ್ದೇವೆ ಎಂದು ಅಕ್ಕ ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷ ವೀರಪ್ಪ
ಅರಕೇರಿಯವರು ಮಾತನಾಡಿ ಹೇಳಿದರು
ನಗರದಲ್ಲಿ ಮಕ್ಕಳು ತಿನ್ನುವ ಚಿಪ್ಸ್ ಪಾಕೆಟ್ ಗಳು ಬಿಸ್ಕಿಟಗಳು, ಕುಡಿಯುವ ನೀರಿನ ಗ್ಲಾಸ್ ಗಳು ಗುಟ್ಕಾ ತಯಾರಕರು ತಮ್ಮಿಂದ ಬಂದ ಪ್ಲಾಸ್ಟಿಕ್ ವ್ಯಾಪರ ವೇಸ್ಟ್ ತೆಗೆದು ಕೋಂಡು ರಿಸೈಕಲ್ ಮಾಡಿಸದೆ ಇರೋದಿರಿಂದ , ಸುಪ್ರೀಂ ಕೋಟ್ ತಿರ್ಪಿನ ಪ್ರಕಾರ ಸಂವಿದಾನ 21 ಹಾಗೂ 14ನೆ ಪರಿಚ್ಛೇದದಲ್ಲಿ ಮೂಲಭೂತ ಹಕ್ಕುಗಳನ್ನು ಹೇಳಲಾಗಿದ್ದು ಅದೇ ಸಾಲಿಗೆ ಹವಾಮಾನ ಬದಲಾವಣೆಯ ವಿರುದ್ಧದ ಹಕ್ಕೂ ಸೇರುತ್ತದೆ ಎಂದಿದೆ ಈ ಆದೇಶದಿಂದ ಹವಾಮಾನ ಬದಲಾವಣೆ ತಾಪ ಏರಿಕೆಯ ತಡೆಯಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಭೇಡಿಕೆಗಳು ಬಹಳ ಅವಶ್ಯ ಇದೆ ಇವುಗಳನ್ನು ತಾವು ಜಾರಿಗೆ ತರದೆ ಹೋದರೆ ಇನ್ನೂ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು. ಈ ಮೌನ ಪ್ರತಿಭಟನೆಯಲ್ಲಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.