ಹುಬ್ಬಳ್ಳಿ: ನಗರದ ಬಾಲಾಜಿನಗರದ ನಿವೃತ್ತ ನೌಕರರೊಬ್ಬರಿಗೆ ವಂಚಕರು ಸಿಮ್ ಕಾರ್ಡ್ ಡಾಕ್ಯೂಮೆಂಟ್ ವೇರಿಫಿಕೇಶನ್ ಮಾಡುತ್ತೇನೆಂದು ನಂಬಿಸಿ, ಮೊಬೈಲ್‌ನಲ್ಲಿ ಏನಿಡೆಸ್ಕ್ ಅಪ್ಲಿಕೇಶನ್ ಇನ್ ಸ್ಟಾಲ್ ಮಾಡಿಸಿ, ದಂಪತಿ ಖಾತೆಯಿಂದ ಹಂತ ಹಂತವಾಗಿ 5.20ಲಕ್ಷ ರೂ.ಗಳನ್ನು ಅಮೆಜಾನ್ ಆನ್ ಲೈನ್ ಪರ್ಚೇಜ್ ಬಳಸಿಕೊಂಡು ಮೋಸ ಮಾಡಿದ್ದಾರೆ.
ಬಿಕಾಶಚಂದ್ರ ಎಂಬುವರೆ ವಂಚನೆಗೊಂಡಿದ್ದಾರೆ. ಇವರ ಮೊಬೈಲ್ ಅಪರಿಚಿತರು ಕರೆ ಮಾಡಿ, ಸಿಮ್ ಕಾರ್ಡ್ ವೆರಿಫಿಕೇಶನ್ ಪೆಂಡಿಂಗ್ ಇದೆ. ಕಸ್ಟಮರ್ ಕೇರ್ ಸರ್ವಿಸ್ ಸಂಖ್ಯೆಗೆ ಕರೆ ಮಾಡಿ, ಇಲ್ಲವಾದರೆ 24ಗಂಟೆಯೊಳಗೆ ಬ್ಲಾಕ್ ಮಾಡುತ್ತೇವೆಂದು ನಂಬಿಸಿದ್ದಾರೆ.
ನಂತರ ಡಾಕ್ಯುಮೆಂಟ್ ವೆರಿಫಿಕೇಶನ್ ಮಾಡುತ್ತೇವೆಂದು ಹೇಳಿ, ದಂಪತಿಯ ಬ್ಯಾಂಕ್‌ನ ಖಾತೆಯ ಗೌಪ್ಯಮಾಹಿತಿಯನ್ನು ಏನಿಡೆಸ್ಕ್ ಅಪ್ಲಿಕೇಶನ್ ಮೂಲಕ ಪಡೆದಿದ್ದಾರೆ. ದಂಪತಿಯ ಜಂಟಿ ಖಾತೆಗೆ 5.17ಲಕ್ಷ ರೂ.ವರ್ಗಾಯಿಸಿಕೊಂಡು, ನಂತರ ಅದನ್ನು ಬಿಕಾಶಚಂದ್ರರ ಪತ್ನಿ ಖಾತೆಗೆ ವರ್ಗಾವಣೆ ಮಾಡಿ, ಆ ಖಾತೆಯಿಂದಹಂತ ಹಂತವಾಗಿ 50 ಸಾವಿರ ರೂ.ಗಳಂತೆ ಹತ್ತು ಬಾರಿ ಮತ್ತು 20ಸಾವಿರ ರೂ.ವನ್ನು ಅಮೆಜಾನ್ ಆನ್‌ಲೈನ್ ಪರ್ಚೇಜ್ ಉಪಯೋಗಿಸಿಕೊಂಡು ವಂಚಿಸಿದ್ದಾರೆ. ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Check Also
ಬಾಬಾ ಸಾಹೇಬರಿಗೆ ಅಪಮಾನ – ಬಹಿರಂಗ ಚರ್ಚೆಗೆ ಬೆಲ್ಲದ ಸವಾಲು: ಅರವಿಂದ ಬೆಲ್ಲದ
Spread the loveಹುಬ್ಬಳ್ಳಿ:ಅಮಿತ್ ಶಾ ಅವರು ಸಂಸತ್ತಿನಲ್ಲಿ ನೀಡಿದ್ದ ಹೇಳಿಕೆಯನ್ನು ತಿರುಚಿ, ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡಿದ್ದು ಕಾಂಗ್ರೆಸ್ ಟೂಲ್‌ಕಿಟ್‌ನ …