ಹುಬ್ಬಳ್ಳಿ: ನಗರದಿಂದ ಬೆಳಗಾವಿ ಹೊರಟಿದ್ದ ಸಶಸ್ತ್ರ ಮೀಸಲು ಪಡೆಯ ವಾಹನಕ್ಕೆ ಲಾರಿಯೊಂದು ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಲಾರಿ ಚಾಲಕ ಲಾರಿಯಲ್ಲೇ ಸಿಲುಕಿಕೊಂಡಿದ್ದು, ಸುಮಾರು ಹೊತ್ತು ಕಾರ್ಯಾಚರಣೆ ಮಾಡಿ ಹೊರಗೆ ತೆಗೆದ ಘಟನೆ ನಡೆದಿದೆ.
ಬೆಳಗಾವಿಗೆ ಹೊರಟಿದ್ದ ಪೊಲೀಸ್ ವಾಹನಕ್ಕೆ ವೇಗವಾಗಿ ಬಂದ ಲಾರಿಯು ಡಿಕ್ಕಿ ಹೊಡೆದ ಪರಿಣಾಮ, ಲಾರಿಯ ಮುಂಭಾಗ ಒಳಗೆ ಹೋಗಿ, ಚಾಲಕ ಅಲ್ಲಿಯೇ ಸಿಲುಕಿಕೊಂಡಿದ್ದರು.
ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸ್ಥಳೀಯರು ಹಾಗೂ ಪೊಲೀಸರು ಲಾರಿಗೆ ಹಗ್ಗವನ್ನ ಕಟ್ಟಿ, ಗಂಭೀರ ಸ್ಥಿತಿಯಲ್ಲಿದ್ದ ಲಾರಿ ಚಾಲಕನನ್ನ ಹೊರಗೆ ತೆಗೆಯಲಾಯಿತು. ಘಟನೆಯಿಂದ ಕೆಲಕಾಲ ರಸ್ತೆ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು.