ಹುಬ್ಬಳ್ಳಿಯ ಕೋಳಿವಾಡದಲ್ಲಿ ಬಾರಿ ಬೆಂಕಿ ದುರಂತ…ಸುಟ್ಟು ಕರಕಲಾದ ಮನೆ ಅಂಗಡಿ.

Spread the love

ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಬಾರಿ ಬೆಂಕಿ ಅವಘಡ ಸಂಭವಿಸಿದ್ದು ಅಂಗಡಿ ಹಾಗೂ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ನಡೆದಿದೆ.ಕೋಳಿವಾಡ ಗ್ರಾಮದ ಶಂಭುಲಿಂಗ ಜಂತ್ಲಿ ಎಂಬುವರಿಗೆ ಸೇರಿದ ಅಂಗಡಿಗೆ ಬೆಂಕಿ ಬಿದ್ದಿದ್ದು ಗ್ರಾಮಸ್ತರು ಕೂಡಾ ಬೆಂಕಿ ನಂದಿಸಲು ಹಾರಸಾಹಸ ಪಟ್ಟಿದ್ದಾರೆ,ಆದ್ರೆ ಅಂಗಡಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಇದ್ದ ಕಾರಣ ಬೆಂಕಿ ಹತೋಟಿಗೆ ಬಂದಿಲ್ಲ.ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ಸಿಗುತ್ತಿದ್ದ ಹಾಗೇ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವ ಕಾರ್ಯವನ್ನು ಮಾಡಿದ್ದಾರೆ,ಬೆಂಕಿಯ ಅವಘಡದಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು,ಬೆಂಕಿ ಯಾವ ರೀತಿಯಾಗಿ ಹತ್ತಿದೆ ಎಂಬ ಮಾಹಿತಿ ಇನ್ನು ಲಭ್ಯವಾಗಿಲ್ಲ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ


Spread the love

Leave a Reply

error: Content is protected !!