ಸಮಾಜ ರತ್ನ ಪ್ರಶಸ್ತಿ ಪುರಸ್ಕೃತ ರಮೇಶ ಮಹಾದೇವಪ್ಪನವರಿಗೆ ಆತ್ಮೀಯ ಸನ್ಮಾನ
ಸಮಾಜ ಸೇವೆಗೆ ಅವಕಾಶ ಸಿಕ್ಕಿದ್ದು ಪೂರ್ವ ಜನ್ಮನ ಪುಣ್ಯ- ಮಹದೇವಪ್ಪನವರ
ಹುಬ್ಬಳ್ಳಿ; ಸಮಾಜ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿದ ಹಿನ್ನೆಲೆಯಲ್ಲಿ ಸರ್ವಧರ್ಮ ಸಮಾಜ ಸೇವಕರಾದ ರಮೇಶ ಮಹಾದೇವಪ್ಪನವರಿಗೆ ನಗರದ ಉಣಕಲದ ಸಿದ್ದ ಕಲ್ಯಾಣ ನಗರದ ಶ್ರೀ ಗಣಪತಿ ದೇವಸ್ಥಾನದ ಆವರಣದಲ್ಲಿಂದು ಗೆಳೆಯರ ಬಳಗದ ವತಿಯಿಂದ ಅದ್ದೂರಿಯಾಗಿ ಸನ್ಮಾನಿಸಲಾಯಿತು.
ನಂತರ ಮಾತನಾಡಿದ ರಮೇಶ ಮಹದೇವಪ್ಪನವರ ಸಮಾಜ ಸೇವೆ ಎನ್ನುವುದು ದೇವರ ಕೆಲಸ ಇದ್ದ ಹಾಗೇ ನನಗೆ ಇಂತಹ ಅವಕಾಶ ಸಿಕ್ಕಿದ್ದು ಪೂರ್ವ ಜನ್ಮದ ಪುಣ್ಯ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಸತ್ಯಪ್ಪ ಖಂಡೇಕಾರ, ಬಶೀರ್ ಖಾನ್ ಮುಸಾಫಿರ್, ದೇವಪ್ಪ ಮಹಾದೇವಪ್ಪನವರ, ಪಕೀರಪ್ಪ ಗುಲಗಂಜಿ, ಕಲಂದರ ಮುಲ್ಲಾ, ಕಾಶಿಂಸಾಬ ಕೂಡಲಗಿ, ರಾಜೇಶ್ ಮಹಾದೇವಪ್ಪನವರ, ಹಸನಸಾಬ ತಾಸೆವಾಲೆ, ಶಕೀಲ್ ವಲಿಯಅಹ್ಮದ್, ಯೂನಸ್ ದಂಡಾಯನ್, ರಿಯಾಜ್ ಅಹ್ಮದ್ ಕಾತರ್ಕಿ, ಅಲ್ತಾಫ್ ಮುಲ್ಲಾ, ಪುಟ್ಟು ಬಡಿಗೇರ, ಕಲ್ಲಪ್ಪ, ನಿಸಾರ್ ಬಾರುದವಾಲೆ, ರಾಜು ಈಜಾರೆ ಸಿರಿಗಂತೆ ಅನೇಕರು ಉಪಸ್ಥಿತರಿದ್ದರು.