- ರವಾಡ: ನಗರದಲ್ಲಿ ಇತ್ತೀಚಿಗೆ
ನಡೆದ ಸಾವರ್ಕರ್ ಪೋಟೋ ಸುಟ್ಟು ಹಾಕಲಾಗಿದೆ ಎಂಬ
ವಿಚಾರವಾಗಿ ಶಾಸಕ ಅರವಿಂದ ಬೆಲ್ಲದ ಅವರು ಕಾಂಗ್ರೆಸ್ ಕಾರ್ಯಕರ್ತರ ಮನೆಗೆ ಪೊಲೀಸರನ್ನು
ಕಳುಹಿಸಿ ಬಂಧಿಸುವ ಹಾಗೂ ಹೆದರಿಸುವ ಕೆಲಸ ಮಾಡುಸುತ್ತಿದ್ದು ಇದನ್ನ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು
ಸಹಿಸುವುದಿಲ್ಲ ಅವರ ಇಂತಹ ಕೃತ್ಯ ಬಹಳ ದಿನ ನಡೆಯುವುದಿಲ್ಲ ಇದಕ್ಕೆ ನಮ್ಮ ಕಾರ್ಯಕರ್ತರು ಹೆದರುವದಿಲ್ಲ ಎಂದು ರಾಣಿ ಚೆನ್ನಮ್ಮ ಬ್ಲಾಕ್ ಅಧ್ಯಕ್ಷ ಶ್ರೀ ನಾಗರಾಜ ಗೌರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಅರವಿಂದ ಬೆಲ್ಲದ ಕುಮ್ಮಕಿನಿಂದ ಬೆದರಿಕೆ ಒಡ್ಡುತಿದ್ದಾರೆ. ಶಾಸಕರ ಇನ್ನು ಕೇವಲ ಅವಧಿ ಎಂಟು ತಿಂಗಳಲ್ಲಿ ಕೊನೆಗೊಳ್ಳುತ್ತದೆ. ಮುಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಆಗ ಶಾಸಕ ಅರವಿಂದ ಬೆಲ್ಲದ ಅವರ ಮನೆಗೂ ಪೊಲೀಸರು ಬರುತ್ತಾರೆ. ಇದನ್ನು ಬೆಲ್ಲದ ಅರಿಯಬೇಕೆಂದರು.
ವಿನಾಕಾರಣ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಕಿರುಕುಳ ನೀಡುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅಖಿಲ್ ಭಾರತ ಕಾಂಗ್ರೆಸ್ ಸಮಿತಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ
ಆದೇಶದ ಮೇರೆಗೆ ಕಾಂಗ್ರೆಸ್ ರಾಣಿ ಚೆನ್ನಮ್ಮ ಬ್ಲಾಕ್ ವತಿಯಿಂದ ಆ. 24ರಂದು ಬೆಳಗ್ಗೆ 10.30ಕ್ಕೆ ನಗರದಲ್ಲಿ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ ಎಂದರು. ಈ ಪಾದಯಾತ್ರೆಯನ್ನು
ಗಾಂಧಿನಗರದ ಈಶ್ವರ ದೇವಸ್ಥಾನದಿಂದ ಆರಂಭಿಸಿ ಕಲಾಭವನದವರೆಗೆ ಪಾದಯಾತ್ರೆ ನಡೆಸಲಾಗುವುದು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ಮತ್ತುಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಿರಿಯ ಮುಖಂಡು ವಿಧಾನ ಪರಿಷತ್ ಸದಸ್ಯರಾದ
ಸಲೀಂ ಅಹ್ಮದ್ ಹಾಗೂ ಉಸ್ತುವಾರಿ ಪಿ.ವಿ. ಮೋಹನ್ ಪಾಲ್ಗೊಳ್ಳುವರು.
ಸ್ವಾತಂತ್ರ್ಯದ ಪಕ್ಷಾತೀತ ನಡಿಗೆ ಕಾರ್ಯಕ್ರಮ ಇದ್ದಾಗಿದ್ದು, ಸರ್ವ ಜನಾಂಗದವರು ಪಾಲ್ಗೊಳ್ಳಬೇಕೆಂದು ಕೋರಿದರು.ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಾಜಿ ಮೇಯರ್ ಪ್ರಕಾಶ್ ಕ್ಯಾರಕಟ್ಟಿ ಕೈ ಮುಖಂಡರಾದ
ಚಂದನ ಸವದಿ, ಕವಿತಾ ಕಬ್ಬೆರ್, ಮಯೂರ್ ಮೊರೆ,ಶಂಭುಗೌಡ ಸಾಲಮನಿ ಇನ್ನಿತರರು ಉಪಸ್ಥಿತರಿದ್ದರು.