ಕಲಘಟಗಿ: ಫೆ. 15 ರಂದು ಜರುಗುವ ಸಂತ ಸೇವಾಲಾಲ ಜಯಂತಿ ಅಂಗವಾಗಿ ಸೇವಾಲಾಲ ಮಾಲಾಧಾರಿಗಳು ಅರಣ್ಯ ಇಲಾಖೆ ಅನುಮತಿ ಮೇರೆಗೆ ಅಡುಗೆ ಹಾಗೂ ಅಗ್ನಿ ಪ್ರವೇಶ ಪೂಜೆಗೆ ಕಟ್ಟಿಗೆ ತರಲು ಅರಣ್ಯಕ್ಕೆ ತೆರಳಿದಾಗ ವಲಯ ಅರಣ್ಯಧಿಕಾರಿ ಅವಾಚ್ಯವಾಗಿ ಸೇವಾಲಾಲ ಮಾಲಾಧಾರಿಗಳು ನಿಂಧಿಸಿದ್ದಾರೆ ಎಂದು ಆರೋಪಿಸಿ ತಹಸೀಲ್ದಾರ ವಿರೇಶ ಮುಳಗುಂದಮಠ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಸೀಲ್ದಾರ ಕಚೇರಿ ಮುಂದೆ ಶನಿವಾರ ಕೆಲ ಹೊತ್ತು ಪ್ರತಿಭಟಿಸಿ ಕಟ್ಟಿಗೆ ತರಲು ತೆರಳಿದ್ದ ಮಾಲಾಧಾರಿಗಳ ಬಗ್ಗೆ ಅವಹೇಳನಕಾರಿ ಮಾತನಾಡಿ ಅವಮಾನಿಸಿದ ಆರ್ ಎಫ್ಓ ವಿರುದ್ದ ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು.
ಸೇವಾಲಾಲ ಜಯಂತಿ ಪೂರ್ವಭಾವಿ ಸಭೆಯಲ್ಲಿ ವಲಯ ಅರಣ್ಯಧಿಕಾರಿ ಅರುಣ್ ಅಷ್ಟಗಿ ಭೇಟಿ ಮಾಡಿ ಕಟ್ಟಿಗೆ ಜಯಂತಿಗೆ ಅವಶ್ಯಕತೆ ಇವೆ ಎಂದು ಮನವರಿಕೆ ಮಾಡಿದಾಗ ಉಪ ವಲಯ ಅರಣ್ಯಧಿಕಾರಿ ಶಿವಾನಂದ ಮಾದರ ಅವರಿಗೆ ಗಲಗಿನಗಟ್ಟಿ ಹದ್ದಿನಲ್ಲಿ ಕಟ್ಟಿಗೆ ತರಲು ತಿಳಿಸಿದ್ದರು.
ಅದರಂತೆ ಶನಿವಾರ ಮಾಲಾಧಾರಿಗಳು ಕಟ್ಟಿಗೆ ತರಲು ತೆರಳಿದಾಗ ನಾವು ಕೊಡುವುದಿಲ್ಲ ಎಂದು ಅವಮಾನಿಸಿ ಕಳಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಈ ಸಮಯದಲ್ಲಿ
ಶೇಕಪ್ಪ ಲಮಾಣಿ, ಭುಜಪ್ಪ ಲಮಾಣಿ, ಪ್ರಕಾಶ ಲಮಾಣಿ, ಶಂಕರ ಲಮಾಣಿ, ಪರಶುರಾಮ ಲಮಾಣಿ, ಕೃಷ್ಣಾ ಲಮಾಣಿ, ನಾಮದೇವ ಲಮಾಣಿ ಹಾಗೂ ಇತರೆ ಮಾಲಾಧಾರಿಗಳು ಉಪಸ್ಥಿತರಿದ್ದರು,
