ಹುಬ್ಬಳ್ಳಿ
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಯೋಗಿ ಭಗೀರಥ ಪೀಠದ ಶ್ರೀ ಡಾ.ಪುರುಷೋತ್ತಮಾನಂದ ಸ್ವಾಮೀಜಿ ಸಮ್ಮುಖದಲ್ಲಿ ಸಮಾಜದ ಅಭಿವೃದ್ಧಿ ಕುರಿತು ನಗರದಲ್ಲಿ ಚರ್ಚೆ ಮಾಡಲಾಯಿತು.
ಧಾರವಾಡ ಜಿಲ್ಲೆಯ ಭಗೀರಥ ಉಪ್ಪಾರ ಸಂಘದ ವತಿಯಿಂದ ಶ್ರೀಗಳನ್ನ ಸ್ವಾಗತಿಸಲಾಯಿತು.
ನಗರದ ಗೋಕುಲ ರಸ್ತೆಯ ವಾಸವಿ ಕಲ್ಯಾಣ ಮಂಟಪ ಹಿಂದುಗಡೆಯ ಸಮಾಜದ ಮುಖಂಡ ಚೆನ್ನಬಸಪ್ಪ ಕಿಟಗೇರಿ ನಿವಾಸದಲ್ಲಿ ಸಮಾಜದ ಮುಖಂಡರಾದ ಲಕ್ಷ್ಮಣ ಉಪ್ಪಾರ, ಹಣಮಂತಪ್ಪ ಗಬ್ಬೂರು ಧಾರವಾಡ ಜಿಲ್ಲಾ ಉಪ್ಪಾರ
ಸಂಘದ ಅಧ್ಯಕ್ಷ ಸಹದೇವ ಡಿ.ಬೇವನಗಿಡದ, ಉಪ್ಪಾರ, ಮುಖಂಡರಾದ ಅಜ್ಜಪ್ಪ ಉಪ್ಪಾರ, ಸುರೇಶ ಖಾನಾಪುರ,
ಉದಯ ಹುಲಿಬೆಟ್ಟ, ಶಿವು ಉಪ್ಪಾರ ಸೇರಿದಂತೆ ಇನ್ನಿತರರು ಇದ್ದರು.