ಹುಬ್ಬಳ್ಳಿ; ಈ ವರ್ಷ ಯುಗಾದಿ ಹಾಗೂ ಶ್ರೀ ರಾಮ ನವಮಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಎಸ್.ಕೆ ಸಮಾಜದ ಚಿಂತನ ಮಂತನ ಸಮಿತಿಯ ಮುಖ್ಯಸ್ಥ ಹನುಮಂತಸಾ, ಸಿ, ನಿರಂಜನ ಹೇಳಿದರು.
ನಗರದಲ್ಲಿ ರದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಏ.೨ ಯುಗಾದಿಯ ದಿನದಂದು ಎಸ್.ಎಸ್.ಕೆ ಸಮಾಜವನ್ನು ಕೇಂದ್ರಿಕೃತ ಮಾಡಿಕೊಂಡು ಹರ್ ಘರ್ ಭಗವಾ- ಘರ್ ಘರ್ ಭಗವಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಈ ಕಾರಣ ಈಗಾಗಲೆ ಎಸ್.ಎಸ್.ಕೆ ಸಮಾಜದ ಮುಖಂಡರಿಂದ ೨೦೦೦ ಸಾವಿರಕ್ಕೂ ಹೆಚ್ಚು ಧ್ವಜಗಳನ್ನು ವಿತರಿಸಲಾಗಿದೆ. ಯುಗಾದಿ ದಿನದಂದು ಈ ಧ್ವಜವನ್ನು ಎಸ್.ಎಸ್.ಕೆ ಸಮಾಜದ ಕುಟುಂಬಗಳ ಮನೆಯ ಮೇಲೆ ಏಕಕಾಲಕ್ಕೆ ಹಾರಿಸಲಾಗುತ್ತದೆ ಎಂದು ಅವರು ಹೇಳಿದರು.
ಮುಂದುವರೆದು ಮಾತನಾಡಿದ ಅವರು
ಮತ್ತು ಏ.೩ ರಂದು ಸಂಜೆ ೬.೩೦ ರಿಂದ ಸಂಜೆ ೮ ರ ವರೆಗೆ ಕಮರಿಪೇಟ ರಾಮಮಂದಿರದಲ್ಲಿ ಕೌಟುಂಬಿಕ ಮೌಲ್ಯಗಳು ಕುರಿತು ಆರ್.ಎಸ್.ಎಸ್ ನ ಜೇಸ್ಠ ಪ್ರಚಾರಕ ಸು. ರಾಮಣ್ಣ ಅವರಿಂದ ನಡಯಲಿದೆ.
ಏಪ್ರಿಲ್ ೪ ರಿಂದ ಏ.೮ ವರೆಗೆ ಶ್ರೀ ರಾಮ ಚಿಂತನ ಪ್ರವಚನವನ್ನು ಸದ್ಗುರು ಸಮರ್ಥ ಡಾ. ಎ.ಸಿ ವಾಲಿ ಮಹಾರಾಜ ಗುರುಗಳಿಂದ ನಡೆಸಿಕೊಡಲಿದ್ದಾರೆ ಎಂದರು.
ಏ.೧೦ ಶ್ರೀ ರಾಮ ನವಮಿ ಪ್ರಯುಕ್ತ ಕಮರಿಪೇಟಯ ಶ್ರೀ ರಾಮ ಮಂದಿರದಿಂದ ಸಂಜೆ ೪ ರಿಂದ ಶ್ರೀ ರಾಮ ಶೋಭಾ ಯಾತ್ರೆಯನ್ನು ಹಮ್ಮಿಕೋಳ್ಳಲಾಗಿದೆ ಈ ಯಾತ್ರೆಯು ನಗರದ ಪ್ರಮುಖ ಬಿದಿಗಳಲ್ಲಿ ಸಂಚರಿಸಿ ಮೂರುಸಾವಿರ ಮಠದ ಶಾಲಾ ಆವರಣದಲ್ಲಿ ಮುಕ್ತಾಯಗೋಂಡು ಅಲ್ಲಿ ಸಾರ್ವಜನಿಕ ಸಮಾರಂಭ ಜರುಗಲಿದೆ ಎಂದರು.
ಈ ಸಂದರ್ಬದಲ್ಲಿ ಚಿಂತನ ಮಂಥನ ಸಮಿತಿಯ ವಿನಾಯಕ ವಾಘಡೆ, ಅಭಿಷೇಕ ನಿರಂಜನ, ನಿತಾ ಮಿತ್ರಾಣಿ,ನುನಿಲ ವಾಡೆಕರ, ಶ್ರೀಕಾಂತ ಹಭಿಬ್ ಉಪಸ್ಥಿತರಿದ್ದರು.