Breaking News

ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓಓಡಿ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದವರು ಮಾತೃ ಠಾಣೆಗೆ ವರದಿಗೆ ಸೂಚನೆ

Spread the love

ಹುಬ್ಬಳ್ಳಿ – ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓಓಡಿ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಆದೇಶವನ್ನು ಪೊಲೀಸ್ ಕಮೀಷನರ್ ಲಾಬುರಾಮ್ ಶುಕ್ರವಾರ ರದ್ದು ಮಾಡಿ ತಕ್ಷಣ ತಮ್ಮ ಮೂಲ ಠಾಣೆಗೆ ಸೇರ್ಪಡೆ ವರದಿ ಮಾಡಿಕೊಳ್ಳಲು ಆದೇಶ ಹೊರಡಿಸಿದ್ದಾರೆ.
ಈ ಕುರಿತು ಸುತ್ತೋಲೆ ಹೊರಡಿಸಿರುವ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ಈ ಹಿಂದೆ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ವಿವಿಧ ಪೊಲೀಸ್ ಠಾಣೆಯಲ್ಲಿ ಓಓಡಿ ಆಧಾರದ ಮೇಲೆ ನಿಯೋಜನೆ ಗೊಂಡು ಕರ್ತವ್ಯ ಮಾಡುತ್ತಿದ್ದ ಎಎಸ್ ಐ, ಸಿಎಚ್ ಐ ಹಾಗೂ ಸಿಪಿಸಿ ಸಿಬ್ಬಂದಿ ತಮ್ನ ತಮ್ಮ ಮಾತೃ ಠಾಣೆಗೆ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ.
ಹುಬ್ಬಳ್ಳಿ ಧಾರವಾಡ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು ,36 ಸಿಬ್ಬಂದಿ ಓಓಡಿ ಆಧಾರ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.2014 ರಿಂದ 2021 ರವರಿನ ಈ ಸಿಬ್ಬಂದಿ ಓಓಡಿ ಆಧಾರ ಮೇಲೆ ನಿಯೋಜನೆ ಮಾಡಲಾಗುತ್ತು.


Spread the love

About Karnataka Junction

[ajax_load_more]

Check Also

ಕೊರವಿ ಡೆವಲಪರ್ಸ್ ವತಿಯಿಂದ ನ. 17 ರಂದು ಕೊರವಿ ಗ್ರೀನ್ ಸಿಟಿ’ ಭೂಮಿ ಪೂಜೆ ಸಮಾರಂಭ

Spread the loveಹುಬ್ಬಳ್ಳಿ : ನಗರದ ಕೊರವಿ ಡೆವಲಪರ್ಸ್ ವತಿಯಿಂದ ನ. 17 ರಂದು ಬೆಳಗ್ಗೆ 10.30ಕ್ಕೆ ಧಾರವಾಡದ ಗರಗ …

Leave a Reply

error: Content is protected !!