Breaking News

ನೀವೇನೂ ಹೆದರಬ್ಯಾಡ್ರಿ ನಾವು ನಿಮ್ಮ ಜೊತೆ ಅದೇವಿ: ಶಿವಲೀಲಾ ಕುಲಕರ್ಣಿಗೆ ಅಭಯ ನೀಡಿದ ನರೇಂದ್ರ ಗ್ರಾಮಸ್ಥರು

Spread the love

ಧಾರವಾಡ: ಅಣ್ಣಾರ ಇಲ್ಲಂತ ನೀವೇನೂ ಹೆದರಬ್ಯಾಡ್ರಿ. ನಾವ್ ನಿಮ್ಮ ಜೊತೆ ನಿಂತ ಕ್ಯಾನವಾಸ್ ಮಾಡ್ತೇವಿ ಅಂತಾ ನರೇಂದ್ರ ಗ್ರಾಮದ ಹೆಣ್ಣು ಮಕ್ಕಳು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರಿಗೆ ಅಭಯ ನೀಡಿದ್ದಾರೆ.

ವಿನಯ್ ಕುಲಕರ್ಣಿ ಅವರ ಪರವಾಗಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಹಾಗೂ ಅವರ ಪುತ್ರ ಹೇಮಂತ್ ಕುಲಕರ್ಣಿ ಅವರು ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಪಾದಯಾತ್ರೆ ಮಾಡುವ ಮೂಲಕ ಮತಯಾಚನೆ ಮಾಡಿದರು.

ಪಾದಯಾತ್ರೆ ಮಾಡುವ ವೇಳೆ ನರೇಂದ್ರ ಗ್ರಾಮದಲ್ಲಿ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ ಅವರನ್ನು ಮನೆ ಮಗಳಂತೆ ಕಂಡ ನರೇಂದ್ರ ಗ್ರಾಮಸ್ಥರು- ಆರತಿ ಎತ್ತಿ, ಮಾಂಗಲ್ಯ ಪೂಜೆ ಮಾಡಿದ ಸುಮಂಗಲೆಯರು ಹೆಣ್ಣು ಮಕ್ಕಳು ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಅವರನ್ನು ಸನ್ಮಾನಿಸಿ, ಉಡಿ ತುಂಬಿ ಅವರಿಗೆ ಅಭಯ ನೀಡಿದರು.

ನರೇಂದ್ರ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ನಡೆಸಿದ ಶಿವಲೀಲಾ ಕುಲಕರ್ಣಿ ಅವರು ಮನೆ, ಮನೆಗೆ ತೆರಳಿ ವಿನಯ್ ಕುಲಕರ್ಣಿ ಪರ ಮತಯಾಚನೆ ಮಾಡಿದರು. ಶಿವಲೀಲಾ ಅವರು ಮನೆ, ಮನೆಗೆ ಹೋದ ವೇಳೆ ನರೇಂದ್ರ ಗ್ರಾಮಸ್ಥರು ಅವರಿಗೆ ಉಡಿ ತುಂಬಿ ಗೌರವಿಸಿದರು. ಅಲ್ಲದೇ ನಾವು ನಿಮ್ಮ ಬೆಂಬಲಕ್ಕಿದ್ದೇವೆ ಎಂಬ ಭರವಸೆ ನೀಡಿದರು. ಶಿವಲೀಲಾ ಕುಲಕರ್ಣಿ ಅವರಿಗೆ ಅವರ ಪುತ್ರ ಹೇಮಂತ ಕುಲಕರ್ಣಿ ಸಹ ಸಾಥ್ ನೀಡಿದರು. ವಿನಯ್ ಕುಲಕರ್ಣಿ ಅವರಿಗೆ ಯಾವುದೇ ಸ್ಟಾರ್ ಪ್ರಚಾರಕರ ಅವಶ್ಯಕತೆ ಇಲ್ಲ. ಅವರು ಮಾಡಿದ ಅಭಿವೃದ್ಧಿ ಕೆಲಸಗಳೇ ಇಂದು ಮಾತನಾಡುತ್ತಿವೆ. ಪ್ರತಿಯೊಬ್ಬರೂ ತಾವೇ ವಿನಯ್ ಕುಲಕರ್ಣಿ ಎಂದು ಸ್ಟಾರ್ ಪ್ರಚಾರಕಾರಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಇನ್ನು ಧಾರವಾಡ ಗ್ರಾಮೀಣ ಭಾಗದ ಜನ ನಮ್ಮನ್ನು ಬಹಳ ಪ್ರೀತಿ ಹಾಗೂ ವಿಶ್ವಾಸದಿಂದ ಕಾಣುತ್ತಿದ್ದಾರೆ. ಪ್ರೀತಿ ನೀಡುತ್ತಿದ್ದಾರೆ. ಮನೆಗೆ ಕರೆದು ಹಾಲು, ಮಜ್ಜಿಗೆ ಕೊಟ್ಟು ಮನೆಯ ಮಗನಂತೆ ಕಾಣುತ್ತಿದ್ದಾರೆ. ಜನರ ಈ ಪ್ರೀತಿ ವಿಶ್ವಾಸ ನೋಡಿದರೆ ನಮ್ಮ ತಂದೆಯವರು ಜಿಲ್ಲೆಯ ಹೊರಗಿದ್ದರೂ ಅಭೂತಪೂರ್ವ ಮತಗಳ ಅಂತರದಿಂದ ಗೆಲುವು ಸಾಧಿಸುವುದಂತೂ ಪಕ್ಕಾ ಎಂದು ವಿನಯ್ ಅವರ ಪುತ್ರ ಹೇಮಂತ್ ವಿಶ್ವಾಸ ವ್ಯಕ್ತಪಡಿಸಿದರು.

ಒಟ್ಟಾರೆ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ವಿನಯ್ ಕುಲಕರ್ಣಿ ಪರ ಅವರ ಪತ್ನಿ ನಡೆಸುತ್ತಿರುವ ಪ್ರಚಾರ ಕಾರ್ಯ ದಿನದಿಂದ ದಿನಕ್ಕೆ ಹುರುಪು ಪಡೆದುಕೊಳ್ಳುತ್ತಿದೆ. ನರೇಂದ್ರ ಗ್ರಾಮದಲ್ಲಿ ಶಿವಲೀಲಾ ಅವರಿಗೆ ಉತ್ತಮ ಜನ ಬೆಂಬಲ ವ್ಯಕ್ತವಾಗುವುದರೊಂದಿಗೆ ನಿಮ್ಮ ಜೊತೆ ನಾವಿದ್ದೇವೆ ಎಂಬ ಅಭಯ ಕೂಡ ಸಿಕ್ಕಿದೆ. ನರೇಂದ್ರ ಗ್ರಾಮದಲ್ಲಿ ನಡೆದ ಪಾದಯಾತ್ರೆಯಲ್ಲಿ ಬ್ಲಾಕ್ ಅಧ್ಯಕ್ಷರುಗಳಾದ ಈಶ್ವರ ಶಿವಳ್ಳಿ,ಅರವಿಂದ ಏಗನಗೌಡರ,ಮುಖಂಡರಾದ ಕರೆಪ್ಪ ಮಾದರ,ಮೈಲಾರಗೌಡ ಪಾಟೀಲ,ಬಸವರಾಜ ಮೊರಬದ, ಕಲ್ಲಪ್ಪ ಪುಡಕಲಕಟ್ಟಿ,ಸೇರಿದಂತೆ ಅನೇಕರು ಭಾಗಿಯಾಗಿದ್ದರು.


Spread the love

About Karnataka Junction

[ajax_load_more]

Check Also

ನನಗಿಂತ ಭರತ್ ಗೆ ಹೆಚ್ಚು ಮತ ನೀಡಿ ಗೆಲ್ಲಸಿ- ಸಂಸದ ಬಸವರಾಜ ಬೊಮ್ಮಾಯಿ ಮನವಿ

Spread the loveಹುಬ್ಬಳ್ಳಿ: ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿದ್ದ ಶಿಗ್ಗಾಂವಿ- ಸವಣೂರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಭಾರತೀಯ ಜನತಾ …

Leave a Reply

error: Content is protected !!