ನೇಪಾಳ : ಬೆಳಗ್ಗೆಯಿಂದ ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿದ್ದ ನೇಪಾಳ ತಾರಾ ವಿಮಾನ ಇದೀಗ ಮಸ್ತಾಂಗ್ ಜಿಲ್ಲೆಯ ನದಿ ಬಳಿ ಅಪಘಾತವಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ. ನಾಲ್ವರು ಭಾರತೀಯರು, ವಿಮಾನ ಸಿಬ್ಬಂದಿ ಸೇರಿ ಒಟ್ಟು 22 ಮಂದಿ ಪ್ರಯಾಣಿಕರಿದ್ದ ಈ ವಿಮಾನ ಅಪಘಾತದಲ್ಲಿನ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ನೇಪಾಳದ ತಾರಾ ಏರ್ NAET ವಿಮಾನ ಇಂದು(ಮೇ.29) ಬೆಳಗ್ಗೆ 9.55ಕ್ಕೆ ನೇಪಾಳದ ಫೋಖರಾದಿಂದ ಜೋಮ್ಸ್‌ಗೆ ಪ್ರಯಾಣ ಬೆಳೆಸಿತ್ತು. ಕೆಲ ಹೊತ್ತಲ್ಲೆ ವಿಮಾನ ಸಂಪರ್ಕ ಕಡಿದುಕೊಂಡಿದೆ. ಇದೀಗ ಮಸ್ತಾಂಗ್ ಜಿಲ್ಲೆಯ ಲಮ್ಚೆ ನದಿ ಬಳಿ ವಿಮಾನ ಅಪಘಾತವಾಗಿರುವು ಮಾಹಿತಿ ಲಭ್ಯವಾಗಿದೆ. ವಿಮಾನ ಲಮ್ಚೆ ನದಿ ಬಳಿ ಪತ್ತೆಯಾಗಿದೆ ಎಂದು ನೇಪಾಳ ವಿಮಾನಯಾನ ಸಚಿವಾಲಯ ಸ್ಪಷ್ಟಪಡಿಸಿದೆ.
ತಾರಾ ಏರ್ ವಿಮಾನದಲ್ಲಿದ್ದ ಪೈಲೆಟ್ ಮೊಬೈಲ್ ಫೋನ್‌ಗೆ ಕರೆ ಮಾಡಿದಾಗ ರಿಂಗ್ ಆಗುತ್ತಿತ್ತು. ಹೀಗಾಗಿ ಮೊಬೈಲ್ ಟವರ್ ಲೋಕೆಶನ್ ಆಧರಿಸಿ ನಿಯೋಜಿಸಲಾದ ಎರಡು ಹೆಲಿಕಾಪ್ಟರ್ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ನದಿ ಬಳಿ ವಿಮಾನ ಅಪಘಾತವಾಗಿರುವುದು ಪತ್ತೆಯಾಗಿದೆ.
ಇದೀಗ ನೇಪಾಳ ಸೇನೆ ಸ್ಥಳಕ್ಕೆ ಧಾವಿಸಿದೆ. ಅಪಘಾತದ ತೀವ್ರತೆ, ವಿಮಾನದಲ್ಲಿನ ಪ್ರಯಾಣಿಕರು ಹಾಗೂ ಸಿಬ್ಬಂದಿಗಳ ಪರಿಸ್ಥಿತ ಕುರಿತು ಮಾಹಿತಿ ಲಭ್ಯವಾಗಿಲ್ಲ. ಸೇನೆ ಹಾಗೂ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದೆ.