Breaking News

ತಪ್ಪು ಮಾಡದ ವ್ಯಕ್ತಿಯನ್ನು ಬಂಧಿಸಿದ್ರೆ ಪೋಲಿಸರಿಗೆ ದಂಡ

Spread the love

ಬೆಂಗಳೂರು: ತಪ್ಪು ಮಾಡದ ವ್ಯಕ್ತಿಯನ್ನು ಬಂಧಿಸಿದರೆ ಅದಕ್ಕೆ ಪೊಲೀಸರೇ ಜವಾಬ್ದಾರರಾಗಿದ್ದು, ವ್ಯಕ್ತಿಯನ್ನು ಬಂಧಿಸಿದ ಪೊಲೀಸ್ ಅಧಿಕಾರಿಯೇ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನಿಂಗರಾಜು ಎನ್ಎಂಬ ಅಮಾಯಕರೊಬ್ಬರನ್ನು ಪೊಲೀಸರು ಬಂಧಿಸಿದ ಕೇಸಗೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಇಂತದ್ದೊಂದು ಮಹತ್ವದ ತೀರ್ಪು ಪ್ರಕಟಿಸಿದೆ.

ಓರ್ವ ವ್ಯಕ್ತಿ ಮೇಲೆ ಯಾವುದೇ ರೀತಿಯ ಆಪಾದನೆ ವಾರಂಟ್ ಹೊರಡಿಸಿದಾಗ ಜಾಮೀನು ಅಥವಾ ಜಾಮೀನು ರಹಿತವಾಗಿದ್ದರೂ ಬಂಧಿತ ವ್ಯಕ್ತಿ ಹೌದೋ ಅಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದ್ದು ಪೊಲೀಸರ ಜವಾಬ್ದಾರಿ. ಪ್ರಸ್ತುತ ಪ್ರಕರಣದಲ್ಲಿ ಗೊಂದಲ ಆಗಿರುವ ಹಿನ್ನೆಲೆಯಲ್ಲಿ ಅಕ್ರಮ ಬಂಧನಕ್ಕಾಗಿ 5 ಲಕ್ಷ ರೂಪಾಯಿ ಪರಿಹಾರವನ್ನು ಬಂಧಿಸಿದ ಪೊಲೀಸ್ ಅಧಿಕಾರಿಯೇ ನೀಡುವಂತೆ ಸೂಚನೆ ನೀಡಿದೆ.


Spread the love

About Karnataka Junction

    Check Also

    ಬಹುದೊಡ್ಡ ಪ್ರಮಾಣದಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ- ಟೆಂಗಿನಕಾಯಿ

    Spread the loveಬಹುದೊಡ್ಡ ಪ್ರಮಾಣದಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ- ಟೆಂಗಿನಕಾಯಿ ಹುಬ್ಬಳ್ಳಿ: ಈ ಸಲ ಮೂರನೇ ಬಾರಿಗೆ ಪ್ರಧಾನಿ ನರೇಂದ್ರ …

    Leave a Reply

    error: Content is protected !!