Breaking News

ಚಳಗೇರಿಗ್ರಾಮದಲ್ಲಿ ಮಡುಗಟ್ಟಿದ ವಾತಾವರಣ

Spread the love

ಹುಬ್ಬಳ್ಳಿ: ಉಕ್ರೇನ್​ನ ಖಾರ್ಕಿವ್​​ ನಗರದ ಮೇಲೆ ರಷ್ಯಾ ನಡೆಸಿರುವ ಶೆಲ್ ದಾಳಿಯಲ್ಲಿ ಹಾವೇರಿಯ ಜಿಲ್ಲೆಯ 21 ವರ್ಷದ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾನಗೌಡರ್​​ ಸಾವಿಗೀಡಾಗಿದ ಸುದ್ದಿ ಪಾಲಕರು ಹಾಗೂ ಗ್ರಾಮಸ್ಥರು ಕೇಳುತಿದ್ದಂತೆ ಜನಪ್ರತಿ‌ನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತಿದ್ದಾರೆ.
ನಾವು ಸಂಸದ ಶಿವಕುಮಾರ್ ಉದಾಸಿ,‌ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಶಾಸಕರಲ್ಲಿ ಮನವಿ ಮಾಡಿದರು ಏನು ಪ್ರಯೋಜನವಾಗಿಲ್ಲ. ಸಾಕಷ್ಟು ಸಲ ಸಂಬಂಧಿಸಿದ‌ವರಿಗೆ ದೂರವಾಣಿ ಮೂಲಕ ಸಂಪರ್ಕ ಮಾಡಿದರು ಯಾವುದೇ ರೀತಿಯ ಸ್ಪಂದನೆ ಸಿಗುತಿಲ್ಲ ಎಂದು ಪಾಲಕರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೋಷಕರಲ್ಲಿ ಶೋಕ ಮಡುಗಟ್ಟಿದೆ. ನವೀನ್ ಮನೆಯತ್ತ ಜನರ ದಂಡು ಹಾವೇರಿಯ ವಿದ್ಯಾರ್ಥಿ ನವೀನ್ ಸಾಖಾರ್ಕಿವ್‌ನ ಶವಾಗಾರದಲ್ಲಿ ನವೀನ್‌ ಮೃತದೇಹ ಇರಿಸಲಾಗಿದ್ದು, ಈಗಾಗಲೇ ಮೃತ ನವೀನ್​ ಕುಟುಂಬಸ್ಥರೊಂದಿಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಂಪರ್ಕದಲ್ಲಿದೆ. ನವೀನ್ ಇತರೆ ಸ್ನೇಹಿತರೊಂದಿಗೆ ವ್ಯಾಸಂಗ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.


Spread the love

About Karnataka Junction

    Check Also

    *ಹಬ್ಬ ಹರಿದಿನಗಳು ನಾಡಿನ ಸಂಸ್ಕೃತಿಕ ರಾಯಭಾರಿಗಳು ಸದಾನಂದ ವೀ ಡಂಗಣವರ*

    Spread the love*ಹಬ್ಬ ಹರಿದಿನಗಳು ನಾಡಿನ ಸಂಸ್ಕೃತಿಕ ರಾಯಭಾರಿಗಳು ಸದಾನಂದ ವೀ ಡಂಗಣವರ* ಹುಬ್ಬಳ್ಳಿ; ನಗರದ ಪ್ರತಿಷ್ಠಿತ ಮೂರು ಸಾವಿರ …

    Leave a Reply

    error: Content is protected !!