Breaking News

ಕೊಲೆ ಪ್ರಕರಣ, ಆರೋಪಿತರ ಬಂಧನ

Spread the love

ಹುಬ್ಬಳ್ಳಿ; ಇತ್ತೀಚೆಗೆ ಹುಬ್ಬಳ್ಳಿಯ ಸಮೀಪದ ದೇವರಗುಡಿಹಾಳ ಹದ್ದಿಯ ಸರಕಾರಿ ಅರಣ್ಯ ಪ್ರದೇಶದ ಡಾಂಬರ ರಸ್ತೆಗೆ ಹೊಂದಿಕೊAಡಿರುವ ಹುಬ್ಬಳ್ಳಿ 10.5 ಕಿ.ಮೀ ಅಂತಾ ಬರೆದ ಕಿ.ಮೀ ಕಲ್ಲಿನ ಹತ್ತಿರದ ಬಿದರಿನ ಕಂಠಿ ಹತ್ತಿರ ಯಾರೋ ಆರೋಪಿತರು ಯಾವುದೋ ಉದ್ದೇಶಕ್ಕಾಗಿ ಅನಾಮಧೇಯ ವ್ಯಕ್ತಿ ಅಜಮಾಸ ವಯಾ 20 ರಿಂದ 25 ವರ್ಷವನಿಗೆ ಎಲ್ಲಿಯೋ ಕೊಲೆ ಮಾಡಿ ರುಂಡವನ್ನು ಮಾತ್ರ ತಂದು ಅರ್ಧಮರ್ಧ ಸುಟ್ಟಿದ್ದು ಇರುತ್ತದೆ, ಅಥವಾ ಸದರ ಜಾಗೆಯಲ್ಲಿ ಕೊಲೆ ಮಾಡಿ ತಲೆ ಕೆಳಗಿನ ಶರೀರವನ್ನು ಎಲ್ಲಿಯೋ ಒಗೆದು ಸಾಕ್ಷಿ ಪುರಾವೆ ನಾಶಪಡಿಸಿದ್ದು ಇರುತ್ತದೆ. ಸದರಿ ಆಪಾಧಿತರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸುವಂತೆ ಪಿರ್ಯಾದಿ ಯಲ್ಲಪ್ಪ ಹನಮಂತಪ್ಪ ದಾಸರ ಸಾ: ದೇವರಗುಡಿಹಾಳ ತಾ: ಹುಬ್ಬಳ್ಳಿ ಇವರು ದಿನಾಂಕ: 12-04-2021 ರಂದು 13:05 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 89/2021 ಕಲಂ: 302, 201 ಐಪಿಸಿ ನೇದ್ದಕ್ಕೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ರಾಘವೇಂದ್ರ ಸುಹಾಸ, ಐಜಿಪಿ ಉತ್ತರವಲಯ ಬೆಳಗಾವಿ ಹಾಗೂ ಪಿ.ಕೃಷ್ಣಕಾಂತ ಪೊಲೀಸ್ ಅಧೀಕ್ಷಕರು ಧಾರವಾಡ ರವರ ಮಾರ್ಗದರ್ಶನದಲ್ಲಿ ಎಮ್.ಬಿ.ಸಂಕದ ಡಿ.ಎಸ್.ಪಿ ಧಾರವಾಡ ಗ್ರಾಮೀಣ ರವರ ನೇತೃತ್ವದಲ್ಲಿ ತನಿಖೆ ಕೈಗೊಂಡು ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸಪೆಕ್ಟರ ಶ್ರೀ ರಮೇಶ ಬಿ ಗೋಕಾಕ, ಕಲಘಟಗಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ ಪ್ರಭು ಸೂರಿನ, ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಮಹೇಂದ್ರ ನಾಯಕ, ಗರಗ ಪೊಲೀಸ್ ಠಾಣೆಯ ಪಿ.ಎಸ್.ಐ ಕಿರಣ ಮೋಹಿತೆ, ಆಳ್ನಾವರ ಠಾಣೆಯ ಪಿ.ಎಸ್.ಐ ಎಸ್.ಆರ್.ಕಣವಿ, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಡಿ.ಚಾಮುಂಡೇಶ್ವರಿ, ಅಣ್ಣಿಗೇರಿ ಪೊಲೀಸ್ ಠಾಣೆಯ ಪಿ.ಎಸ್.ಐ ಬಸವರಾಜ ಹೂಗಾರ, ಪ್ರೋಬೇಶನರಿ ಪಿ.ಎಸ್.ಐ ಮಧು.ಎಲ್, ರೂಪಾಲಿ ಗುಡೋಡಗಿ ಹಾಗೂ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಆರ್.ಎಮ್.ಭದ್ರಾಪೂರ ಎ.ಎಸ್.ಐ, ಡಿ.ಎನ್.ನೀಲಮ್ಮನವರ ಎ.ಎಸ್.ಐ, ಬಿ.ಎಸ್.ಹುಬ್ಬಳ್ಳಿ, ಸಿಬ್ಬಂದಿ ಜನರಾದ ಎನ್.ಐ.ಹಿರೆಹೊಳಿ, ಹೆಚ್.ಬಿ.ಐಹೊಳೆ, ಎಮ್.ಎಫ್.ವಾಲೀಕಾರ, ಎಮ್.ಎನ್.ತಡಹಾಳ, ದೇವರಾಜ ಎಸ್.ಎಮ್, ಎಸ್.ಆರ್.ಯರಗಟ್ಟಿ, ಎಸ್.ಸಿ.ಲಕ್ಕಮ್ಮನವರ, ಆರ್.ಎನ್.ಮರಡೂರ, ಎಮಹಾಂತೇಶ ನಾನಾಗೌಡ, ಎ.ಎ.ಠಕ್ಕಾಯಿ, ಸಿ.ಬಿ.ಜನಗಣ್ಣವರ, ಆರ್.ಬಿ.ಕುಂದಗೋಳ, ಉದಯಕುಮಾರ, ಮಕ್ಬುಲ್ ಹುಲ್ಲೂರ, ಎಫ್.ಎಚ್.ಯಲಿಗಾರ ವೈ.ಡಿ.ಕುಂಬಾರ, ಡೆವಿಡ್ ಕರಬಣ್ಣವರ, ಧಾರವಾಡ ಕಂಪ್ಯೂಟರ ವಿಭಾಗದ ಆರೀಫ್ ಗೋಲಂದಾಜ, ಅಮ್ಜದ.ನವಲೂರ, ಸಿ.ಬಿ.ಮಾಳಗಿ ಇವರನ್ನೊಳಗೊಂಡ ತನಿಖಾ ತಂಡದ ಸದಸ್ಯರು ಈ ಪ್ರಕರಣದ ಆರೋಪಿತರಾದ
1] ನಿಯಾಜಅಹ್ಮದ ಸೈಪುದ್ದೀನ ಕಟಿಗಾರ ವಯಾ: 21 ವರ್ಷ
2] ತೌಸೀಪ ಅಬ್ದುಲರೆಹಮಾನ ಚನ್ನಾಪೂರ ವಯಾ: 21 ವರ್ಷ
3] ಅಲ್ತಾಫ ತಾಜುದ್ದೀನ ಮುಲ್ಲಾ ವಯಾ: 24 ವರ್ಷ
4] ಅಮನ @ ಮಹ್ಮದಉಮರ ತಂದೆ ನೂರಅಹ್ಮದ ಗಿರಣಿವಾಲೆ ವಯಾ: 19 ವರ್ಷ ಸಾ: ಎಲ್ಲರೂ ಹುಬ್ಬಳ್ಳಿ.

ಇವರನ್ನು ಈ ದಿವಸ ದಿನಾಂಕ: 18-04-2021 ರಂದು ಬಂಧಿಸಿ ವಿಚಾರಿಸಲಾಗಿ, ಸದರಿ ಆರೋಪಿ ನಂ: 1 ನೇದವನು ಮೃತ ರಾಕೇಶ ಈತನ ಸಹೋದರಿಯನ್ನು ಪ್ರೀತಿಸುತ್ತಿದ್ದುದಕ್ಕೆ ಮೃತನು ಸಿಟ್ಟಾಗಿದ್ದರಿಂದ ಅವನನ್ನು ಎಲ್ಲ ಆರೋಪಿತರು ಸೇರಿ ಕೊಲೆ ಮಾಡಿ ಶವವನ್ನು ಕತ್ತರಿಸಿ ಅರ್ಧ ಮರ್ಧ ಸುಟ್ಟು ರುಂಡವನ್ನು ದೇವರಗುಡಿಹಾಳ ಹದ್ದಿಯ ಅರಣ್ಯ ಪ್ರದೇಶದಲ್ಲಿ ಹಾಗೂ ಮುಂಡ, ಕೈ ಕಾಲುಗಳನ್ನು ಕೇಶ್ವಾಪೂರ ಠಾಣಾ ವ್ಯಾಪ್ತಿಯಲ್ಲಿ ಒಗೆದು ಸಾಕ್ಷಿ ಪುರಾವೆ ನಾಶಪಡಿಸಿದ್ದು ಇರುತ್ತದೆ ಅಂತಾ ವಗೈರೆ ಅಪರಾಧ ಮಾಡಿರುವುದಾಗಿ ಒಪ್ಪಿಕೊಂಡಿದ್ದು ಇರುತ್ತದೆ. ಸದರಿ ಆಪಾಧಿತರನ್ನು ಬಂಧಿಸಿ ತನಿಖೆ ಮುಂದುವರೆಸಲಾಗಿದೆ. ಪ್ರಕರಣವನ್ನು ಬೆಳಕಿಗೆ ತಂದ ವಿಶೇಷ ತನಿಖಾ ತಂಡದ ಸದಸ್ಯರಿಗೆ ಮೇಲಾಧಿಕಾರಿಗಳಿಂದ ಬಹುಮಾನ ಘೋಷಿಸಲು ಕ್ರಮ ಕೈಗೊಳ್ಳಲಾಗಿದೆ.


Spread the love

About Karnataka Junction

[ajax_load_more]

Check Also

ಬಸ್ ದರ ಏರಿಕೆ ಖಂಡಿಸಿ ಎಬಿವಿಪಿ ಪ್ರತಿಭಟನೆ

Spread the loveಹುಬ್ಬಳ್ಳಿ: ಸಾರಿಗೆ ಪ್ರಯಾಣ ದರವನ್ನು ಶೇ. 15ರಷ್ಟು ಹೆಚ್ಚಳ ಮಾಡಿದ ಸರ್ಕಾರದ ನಿರ್ಧಾರ ಖಂಡಿಸಿ ಅಖಿಲ ಭಾರತೀಯ …

Leave a Reply

error: Content is protected !!