ಕೆದಂಬಾಡಿ ಕ್ರಿಯೇಶನ್ಸ್ ನಿರ್ಮಾಣದ ‘ಪ್ರೇಮಂ ಪೂಜ್ಯಂ’ ಚಿತ್ರವು ನ.12 ರಂದು ದೇಶಾದ್ಯಂತ ತೆರೆ

Spread the love

ಹುಬ್ಬಳ್ಳಿ: ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ ‘ಪ್ರೇಮಂ ಪೂಜ್ಯಂ’ ಚಿತ್ರ ಇತ್ತಿಚೆಗಷ್ಟೇ ಸೆನ್ಸಾರ್ ಮಂಡಳಿಯಿಂದ ‘ಯು/ಎ ಪ್ರಮಾಣ ಪತ್ರ’ ಪಡೆದುಕೊಂಡಿದ್ದು, ನ.12 ರಂದು ದೇಶಾದ್ಯಂತ ತೆರೆಕಾಣಲಿದೆ ಎಂದು ಚಿತ್ರದ ನಿರ್ದೇಶಕ ಬಿ.ಎಂ.ರಾಘವೇಂದ್ರ ಹೇಳಿದರು‌.
ನಗರದಲ್ಲಿಂದು ಪತ್ರಿಕಾಗೋಷ್ಟಿ ಏರ್ಪಡಿಸಿ ಮಾತನಾಡಿದ ಅವರು, ಕೆದಂಬಾಡಿ ಕ್ರಿಯೇಶನ್ಸ್ ನಿರ್ಮಾಣದ ‘ಪ್ರೇಮಂ ಪೂಜ್ಯಂ’ ಚಿತ್ರವು ಸ್ನೇಹ-ಪ್ರೀತಿಯ ಕಥೆ ಹೇಳುತ್ತದೆ. ಇದು ಪ್ರೇಮ್ ನಟನೆಯ 25ನೇ ಸಿನಿಮಾವಾಗಿದ್ದು, ಚಿತ್ರದಲ್ಲಿ ಪ್ರೇಮ್ ಶ್ರೀಹರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದರು.ಪ್ರೇಮಂ ಪೂಜ್ಯಂ ತಂಡದಿಂದ ಪತ್ರಿಕಾಗೋಷ್ಟಿಸಿನಿಮಾವನ್ನು ಕರ್ನಾಟಕ, ಊಟಿ, ಮುನ್ನಾರ್, ಧರ್ಮಶಾಲ ವಿಯೆಟ್ನಾಂ ಸೇರಿದಂತೆ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. 30 ಕೋಟಿ ರೂ. ಬಜೆಟ್​ನ ಈ ಸಿನಿಮಾ ರಾಜ್ಯದಲ್ಲಿ 350ಕ್ಕೂ ಹೆಚ್ಚು ಪಲ್ಟಿಪ್ಲೇಕ್ಸ್, ಸಿಂಗಲ್ ಥಿಯೇಟರ್​ನಲ್ಲಿ ತೆರೆ ಕಾಣಲಿದೆ ಎಂದರು.ನಾಯಕ ನಟ ಪ್ರೇಮ್ ಮಾತನಾಡಿ, ‘ಪ್ರೇಮಂ ಪೂಜ್ಯಂ’ ಚಿತ್ರವನ್ನು ವೈದ್ಯ ಮತ್ತು ಪ್ರಾಧ್ಯಾಪಕ ರಾಘವೇಂದ್ರ ಬಿ.ಎಸ್ ನಿರ್ದೇಶಿಸುವುದರ ಜೊತೆಗೆ ಕಥೆ ಮತ್ತು ಚಿತ್ರಕಥೆಯನ್ನು ಬರೆದಿರುವ ಅವರು, ಚಿತ್ರಕ್ಕೆ ಸಂಗೀತ ಸಂಯೋಜನೆಯನ್ನು ಸಹ ಮಾಡಿದ್ದಾರೆ. ಚಿತ್ರದಲ್ಲಿ 12 ಹಾಡುಗಳಿವೆ. ನಾಯಕಿಯಾಗಿ ಬೃಂದಾ ಆಚಾರ್ಯ ನಟಿಸಿದ್ದು, ಐಂದ್ರಿತಾ ರೇ, ಸುಮನ್, ಮಾಸ್ಟರ್ ಆನಂದ್, ಸಾಧು ಕೋಕಿಲಾ, ಅನು ಪ್ರಭಾಕರ್, ತಪಸ್ವಿನಿ ಸೇರಿದಂತೆ ಹಿರಿಯ ನಿರ್ದೇಶಕ ಟಿ.ಎಸ್ ನಾಗಾಭರಣ ಸಹ ತೆರೆ ಹಂಚಿಕೊಂಡಿದ್ದಾರೆ ಎಂದರು.ಪತ್ರಿಕಾಗೋಷ್ಟಿಯಲ್ಲಿ ಚಿತ್ರದ ನಾಯಕಿ ಬೃಂದಾ ಆಚಾರ್ಯ ಕೂಡ ತಮ್ಮ ಪಾತ್ರ ಚೆನ್ನಾಗಿ ಮೂಡಿ ಬಂದಿದ್ದು, ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂದರು.


Spread the love

Leave a Reply

error: Content is protected !!