ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಘಟಿಕೋತ್ಸವ ಮೇ 1ಕ್ಕೆ ಹುಬ್ಬಳ್ಳಿ: ಇಲ್ಲಿನ ಕೆ.ಎಲ್.ಇ. ವಿಶ್ವವಿದ್ಯಾಲಯದ 2019-20 ಹಾಗೂ 2020-22 ನೇ ಸಾಲಿನ ಘಟಿಕೋತ್ಸವ ಮೇ 1 ರಂದು ವಿಶ್ವವಿದ್ಯಾಲಯದ ನೂತನ ಕ್ರೀಡಾ ಸಂಕೀರ್ಣದಲ್ಲಿ ಬೆಳಿಗ್ಗೆ 9.30ಕ್ಕೆ ನಡೆಯಲಿದೆ. ಮುಖ್ಯ ಅತಿಥಿಯಾಗಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಡಾ.ಅನಿಲ್ ಸಹಸ್ರಬುದ್ಧೆ ಭಾಗವಹಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವಿ ಕುಲಪತಿ ಡಾ.ಅಶೋಕ ಶೆಟ್ಟರ್ ತಿಳಿಸಿದರು. ವಿ.ವಿ.ಯಿಂದ ಮೊದಲ ಬಾರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದ್ದು, ಭಾರತ ಫೋರ್ಜ್ ಲಿಮಿಟೆಡ್ ಅಧ್ಯಕ್ಷ ಬಾಬಾಸಾಹೇಬ್ ಕಲ್ಯಾಣಿ ಅವರಿಗೆ ನೀಡಲಾಗುತ್ತಿದೆ. ಘಟಿಕೋತ್ಸವದಲ್ಲಿ ಉನ್ನತ ಸಾಧನೆ ಮಾಡಿದವರಿಗೆ 32 ಚಿನ್ನದ ಹಾಗೂ 32 ಬೆಳ್ಳಿ ಪದಕಗಳನ್ನು ಪ್ರದಾನ ಮಾಡಲಾಗುತ್ತಿದೆ. 2,509 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದರು
Karnataka Junction
September 23, 2022
categorize, ಜಿಲ್ಲೆ
373 Views