Breaking News

*ಕಾಂಗ್ರೇಸ್ ಕಾರ್ಯಕರ್ತರು ಅರೇಸ್ಟ್*

Spread the love

:

  • ಹುಬ್ಬಳ್ಳಿ.

ನಾಳೆ ಪ್ರತಿಭಟನೆ ನಡೆಸಲು ಪೂರ್ವಭಾವಿ ಸಭೆ ನಡೆಸಿದ ಬಿಜೆಪಿಗರಿಗೆ ಕಾಂಗ್ರೆಸ್ ಗುಲಾಬಿ ಹೂವು ನೀಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆಯಿತು.

ಹೌದು, ರಾಜ್ಯ ವಿಧಾನಸಭೆ ಹಾಗೂ ವಿಧಾನ ಪರಿಷತ್ ಕಲಾಪದ ಸಮಯವನ್ನು ಕಾಂಗ್ರೆಸ್ ವ್ಯರ್ಥ ಮಾಡಿದೆ ಆರೋಪಿಸಿ ಬಿಜೆಪಿ ಪಕ್ಷ ನಾಳೆ ಮತ್ತು ನಾಡಿದ್ದು ರಾಜ್ಯಾದ್ಯಂತ ಜಿಲ್ಲಾ ಮಟ್ಟ ಮತ್ತು ತಾಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಸುವುದಾಗಿ ಘೋಷಣೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಲ್ಲೂ ಬಿಜೆಪಿ ಪ್ರತಿಭಟನೆ ನಡೆಸುವದಾಗಿ ಬಿಜೆಪಿ ರಾಜ್ಯ ಪ್ರದಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಪತ್ರಿಕಾಗೋಷ್ಠಿ ಏರ್ಪಡಿಸಿ ತಿಳಿಸಿದ್ದಾರೆ.

ಅದರಂತೆ ಇಂದು ಪ್ರತಿಭಟನೆ ಪೂರ್ವಭಾಗಿಯಾಗಿ ಬಿಜೆಪಿ ಇಲ್ಲಿನ ದೇಶಪಾಂಡೆ ನಗರದ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿತು. ಈ ವೇಳೆ ಕಾಂಗ್ರೆಸ್ ಆಡಳಿತ ಪಕ್ಷವೇ ವಿರೋಧ ಪಕ್ಷದ ವಿರುದ್ಧ ಪ್ರತಿಭಟನೆ ಮಾಡಿದ್ದು ಇತಿಹಾಸದಲ್ಲಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಪ್ರತಿಭಟನೆಯನ್ನು ಮೊಟಕುಗೊಳಿಸಬೇಕೆಂದು ಮನವರಿಕೆ ಮಾಡಲು ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ಬಿಜೆಪಿಗರಿಗೆ ಗುಲಾಬಿ ಹೂವು ನೀಡಲು ಮುಂದಾಯಿತು. ಈ ವೇಳೆ ಪೋಲಿಸರು ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದ ಘಟನೆ ನಡೆಯಿತು. ನಂತರ ಕಾರ್ಯಕರ್ತರು ಹೂವು ಕೊಟ್ಟೆ ತೀರುತ್ತೇವೆ ಎಂದು ಪಟ್ಟು ಹಿಡಿದರು. ನಂತರ ಅನಿವಾರ್ಯದಿಂದ ಪೋಲಿಸರು ಶಾಂತಿಯುತವಾಗಿ ಗುಲಾಬಿ ಹೂವು ನೀಡಲು ಅವಕಾಶ ಮಾಡಿಕೊಟ್ಟರು.

ಆದಾಗ್ಯೂ ಕೆಲವು ಕಾರ್ಯಕರ್ತರು ಸಚಿವ ಕೆ.ಎಸ್.ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿದರು. ಪರಿಣಾಮ ಕೆಲಕಾಲ ಹೈಡ್ರಾಮಾ ಕೂಡಾ ನಡೆಯಿತು. ಆಗ ಪೋಲಿಸರು ಕಾರ್ಯಕರ್ತರನ್ನು ಬಂಧಿಸಿದರು. ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡುತ್ತಿದ್ದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ಗೌರಿಯನ್ನು ಎಳೆದು ಪೋಲಿಸ್ ವಾಹನಕ್ಕೆ ಹತ್ತಿಸಿದ ಘಟನೆಯೂ ನಡೆಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಸದಸ್ಯರಾಗಿ ಪ್ರಕಾಶ ಕ್ಯಾರಕಟ್ಟಿ, ದೀಪಾ ಗೌರಿ, ಮಾಂತೇಶ ಕುಲಕರ್ಣಿ, ಆರೀಫ್ ಭದ್ರಾಪುರ, ಸಂದೀಲ್ ಕುಮಾರ, ಲಕ್ಷ್ಮಣ, ಶರೀಫ್ ದರಗದ, ಗೋಪಾಲ್ ಸೇರಿದಂತೆ ಮುಂತಾದವರು ಇದ್ದರು.


Spread the love

About Karnataka Junction

[ajax_load_more]

Check Also

ವಿದ್ಯಾಮಂತ್ರಿಗೆ ಕನ್ನಡ ಬರಲ್ಲ” ಎಂದಿರುವ ವಿದ್ಯಾರ್ಥಿ ಮೇಲೆ ಇಂಗ್ಲೀಷ್ ನಲ್ಲೇ ಕ್ರಮಕ್ಕೆ ಸೂಚನೆ ಅಕ್ಷಮ್ಯ

Spread the loveಹುಬ್ಬಳ್ಳಿ: ‘ವಿದ್ಯಾಮಂತ್ರಿಗೆ ಕನ್ನಡ ಬರಲ್ಲ’ ಎಂದ ವಿದ್ಯಾರ್ಥಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿಕ್ಷೆ ವಿಧಿಸಲು ಸೂಚಿಸಿರುವುದು …

Leave a Reply

error: Content is protected !!