ಹುΣšಬ್ಬಳ್ಳಿ- ಡಾ. ಬಿ.ಆರ್ ಅಂಬೇಡ್ಕರ್ ಅವರ 130 ನೆ ಜಯಂತಿ ಪ್ರಯುಕ್ತ ಎಡಿಎಸ್.ಎಸ್ ಮತ್ತು ಆರ್.ಕೆ ಟೈಗರ್ಸ್ ಹಾಗೂ ಆರೋಗ್ಯ ಕೇಂದ್ರ ಇವರ ಸಂಯೋಗದೊಂದಿಗೆ ಸಾಯಿ ನಗರ ಟೀಚರ್ಸ್ ಕಾಲೋನಿ ಯಲ್ಲಿ ಕೊರೊನಾ ಲಸಿಕಾ ಶಿಬಿರವನ್ನು ಹಮ್ಮಿಕೊಂಡಿದ್ದರು.ಕೊರೊನಾ ಎಂಬ ಮಹಾಮಾರಿ ದಿನದಿಂದ ದಿನಕ್ಕೆ, ಏರಿತ್ತಿರುವ ಹಿನ್ನೆಲೆ ನಗರದ ಆರ್ ಕೆ ಟೈಗರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 45 ವರ್ಷ ಮೇಲ್ಪಟ್ಟ ವಯಸ್ಕರಿಗೆ ಉಚಿತವಾಗಿ ಕೋವಿಡ್ ಲಸಿಕೆಯನ್ನು ಹಾಕಿಸುವ ಮೂಲಕ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ವಿಶೇಷವಾಗಿ ಆಚರಣೆ ಮಾಡಿದರು.ಇನ್ನೂ ಈ ಶಿಬಿರದದಲ್ಲಿ ಸುಮಾರು 150 ಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿ ಲಸಿಕೆ ಪಡೆದುಕೊಂಡರು. ಈ ಸಂದರ್ಭದಲ್ಲಿ ಆರ್ ಕೆ ಟೈಗರ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ರಮೇಶ್ ಕಾಂಬಳೆ, ಮಾಜಿ ತೆಂಗುನಾಲು ಅಧ್ಯಕ್ಷ ಚನ್ನು ಪಾಟೀಲ, ವಿದ್ಯಾನಗರ ಪೊಲೀಸ್ ಠಾಣೆಯ ಸಿಪಿಐ ಮಹಾಂತೇಶ್ ಹೋಳಿ, ಮಂಜುನಾಥ ಹೊಸಮನಿ, ಡಾ.ಲಿಂಗರಾಜ ಬಿಳೆಕಲ್, ಮಂಜುನಾಥ ಬೆಡಸೂರ್, ಸಂತೋಷ ಹೊಸಮನಿ, ಕಿರಣ ಪವಾರ ಉಪಸ್ಥಿತರಿದ್ದರು..
