Breaking News

ಆರ್ಯನ್ ಖಾನ್ ಗೆ ಡ್ರಗ್ಸ್ ಪ್ರಕರಣದಿಂದ ಆರೋಪ ಮುಕ್ತ

Spread the love

ಮಹಾರಾಷ್ಟ್ರ; ಮುಂಬೈನ ಕ್ರೂಸ್ ಶಿಪ್ ಡ್ರಗ್ಸ್ ಪ್ರಕರಣ ಎದುರಿಸುತ್ತಿದ್ದ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಪುತ್ರ ಆರ್ಯನ್​ಗೆ ಬಿಗ್ ರಿಲೀಫ್ ಸಿಕ್ಕಿದೆ.
ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ ಶುಕ್ರವಾರ ಎನ್‌ಡಿಪಿಎಸ್ ನ್ಯಾಯಾಲಯದಲ್ಲಿ ಆರ್ಯನ್ ಖಾನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಆರ್ಯನ್ ಖಾನ್ ಹೆಸರನ್ನು ಕೈಬಿಟ್ಟಿದೆ. ಈ ಮೂಲಕ ಆರ್ಯನ್​ಗೆ ಕೋರ್ಟ್​ನಿಂದ ಕ್ಲೀನ್ ಚಿಟ್​ ಸಿಕ್ಕಂತಾಗಿದೆ.ಪ್ರಕರಣದಲ್ಲಿ ಮುನ್ಮುನ್ ಧಮೇಚಾ ಮತ್ತು ಅರ್ಬಾಜ್ ಮರ್ಚೆಂಟ್ ಎನ್ನುವವರ ಹೆಸರು ಇದ್ದು ಆರ್ಯನ್ ಖಾನ್ ಸೇರಿದಂದತೆ ಒಟ್ಟು 6 ಜನರ ಹೆಸರನ್ನು ತೆಗೆದು ಹಾಕಿದೆ. 6 ಜನರ ವಿರುದ್ಧ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಸಾಕ್ಷ್ಯಾಧಾರ ಪತ್ತೆಯಾಗದ ಹಿನ್ನೆಲೆ ಆರ್ಯನ್ ಖಾನ್ ಜೊತೆ ಸಾಹು, ಆನಂದ್, ಸುನಿಲ್ ಸೆಹ್, ಅರೋರಾ ಸೇರಿದ್ದಾರೆ.
ಅಕ್ಟೋಬರ್ 2 ರಂದು, ಕ್ರೂಸ್ ಮೇಲೆ ಎಎಸ್​ಸಿ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಇದರಲ್ಲಿ ಶಾರುಖ್​ ಪುತ್ರ ಆರ್ಯನ್ ಖಾನ್ ಸೇರಿದಂತೆ ಒಟ್ಟು 19 ಮಂದಿಯನ್ನ ಬಂದನ ಮಾಡಲಾಗಿತ್ತು.


Spread the love

About Karnataka Junction

[ajax_load_more]

Check Also

ಕೊರವಿ ಡೆವಲಪರ್ಸ್ ವತಿಯಿಂದ ನ. 17 ರಂದು ಕೊರವಿ ಗ್ರೀನ್ ಸಿಟಿ’ ಭೂಮಿ ಪೂಜೆ ಸಮಾರಂಭ

Spread the loveಹುಬ್ಬಳ್ಳಿ : ನಗರದ ಕೊರವಿ ಡೆವಲಪರ್ಸ್ ವತಿಯಿಂದ ನ. 17 ರಂದು ಬೆಳಗ್ಗೆ 10.30ಕ್ಕೆ ಧಾರವಾಡದ ಗರಗ …

Leave a Reply

error: Content is protected !!