ಆರೋಪಿಯನ್ನ ಬಹಿರಂಗವಾಗಿ ಗಲ್ಲಿಗೆರಿಸಿ!

Spread the love

ಹುಬ್ಬಳ್ಳಿ :

ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಕುರಿಗಾಯಿ ಮಹಿಳೆ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಶ್ರೀ ಕನಕ ಸೇವಾ ಸಮಿತಿ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಇಲ್ಲಿನ ಅಂಬೇಡ್ಕರ್ ವೃತ್ತದಿಂದ ಸಂಗೊಳ್ಳಿ ರಾಯಣ್ಣನ ವೃತ್ತದವರೆಗೆ ರ್ಯಾಲಿ ಮಾಢಿ, ಡಾ. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರತಿಭಟನೆ ನಡೆಸಿ ತಹಶಿಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ನಂತರ ಮಾತನಾಡಿ ಕುರುಬ ಸಮಾಜದ ಮುಖಂಡ ಬಸವರಾಜ ಮಲಕಾರಿ ಮಾತನಾಡಿ, ವಿವಿಧ ಸಂಘಟನೆ, ಸಂಘ-ಸಂಸ್ಥೆಗಳು ಎಲ್ಲರೂ ಪಕ್ಷಾತೀತವಾಗಿ ಕುರಿಗಾಯಿ ಮಹಿಳೆ ಲಕ್ಷ್ಮೀ ಕಳ್ಳಿಮನಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಖಂಡನೀಯವಾಗಿದ್ದು , ಆರೋಪಗಳಿಗೆ ಉಗ್ರವಾದ ಶಿಕ್ಷೆ ವಿಧಿಸಬೇಕು. ಅಲ್ಲದೇ ತೆಲಂಗಾಣದಲ್ಲಿ ಅತ್ಯಾಚಾರಗೈದ ಆರೋಪಿಗೆ ಎನ್ ಕೌಂಟರ್ ಮಾಡಿ ಶಿಕ್ಷೆ ವಿಧಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

  1. ಕೊಲೆಯಾದ ಕುರಿಗಾಯಿ ಮಹಿಳೆಗೆ ೫೦ ಲಕ್ಷ ಪರಿಹಾರ, ಆಕೆಯ ಮೂರು ಮಕ್ಕಳಿಗೆ ವಿದ್ಯಾಭ್ಯಾಸವನ್ನು ಸರ್ಕಾರ ನೋಡಿಕೊಳ್ಳಬೇಕು ಹಾಗೂ ಕುರಿಗಾರರಿಗೆ ಗನ್ ಲೈಸನ್ಸ್ ನೀಡಬೇಕು ಎಂದು ಆಗ್ರಹಿಸಿದರು.

  2. ಕುರಿಗಾಯಿಗಳ ಮೇಲಿನ ದೌರ್ಜನ್ಯ, ಶೋಷಣೆ, ಕೊಲೆ,ಅತ್ಯಚಾರ ಖಂಡಿಸಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ಹೀಗೆ ಆದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ರಾಜ್ಯ ಎಲ್ಲ ತಾಲೂಕಿನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕಿದೆ ಎಂದರು.
ಈ ವೇಳೆಯಲ್ಲಿ ಸಂಗೊಳ್ಳಿ ರಾಯಣ್ಣನ ವೃತ್ತದ ಬಳಿ ರಸ್ತೆ ತಡೆದು ತಮ್ಮ ಆಕ್ರೋಶ ಹೊರ ಹಾಕಿದರು.

ಪ್ರತಿಭಟನಾ ಸಂದರ್ಭದಲ್ಲಿ ಮನಸೂರು ಶ್ರೀಗಳು, ಸಿದ್ದಣ್ಣ ತೇಜಿ, ವಿವಿಧ ಕುರುಬ ಸಂಘಟನೆಗಳು ಸೇರಿದಂತೆ ನೂರಾರು ಕುರಿಗಾರರು ಪಾಲ್ಗೊಂಡಿದ್ದರು


Spread the love

About gcsteam

    Check Also

    ಸ್ವಾತಂತ್ರ್ಯದ ಸ್ವಾತಂತ್ರ್ಯ ಉಸಿರಾಟ ಮಾಡುತಿದ್ದರೆ ಕಾಂಗ್ರೆಸ್ ಕಾರಣ- ಸಿದ್ದರಾಮಯ್ಯಾ

    Spread the loveಇಂದು ನಮಗೆ ಸಿಕ್ಕಿದ್ದರೆ, ಸ್ವಾತಂತ್ರ್ಯದ ಫಲವನ್ನ ,ಸ್ವಾತಂತ್ರ್ಯ ಉಸಿರಾಟವನ್ನು ಉಸಿರಾಟ ಮಾಡುತಿದ್ದರೆ ಇದಕ್ಕೆ ಕಾಂಗ್ರೆಸ್ ಪಕ್ಷ ವೇ …

    Leave a Reply